Posts

Showing posts from March, 2017

ಗೆಳೆತನದ ಮಿಡಿತ!

ಮನದಲ್ಲೊಂದು ಪ್ರಶ್ನೆ ಎರಡು ಮೂರು ದಿನದಿಂದ ಎಡಬಿಡದೆ ಕಾಡುತ್ತಿತ್ತು. ಉತ್ತರ ಗೊತ್ತಾಗದ ಅಸಹಾಯಕತೆ, ಉತ್ತರ ಗೊತ್ತಾಗಿಯು ಒಪ್ಪಿಕೊಳ್ಳಲಾರದಂತ ಮನಸ್ಥಿತಿ. ಏಕೋ ಮೊದಲಿನ ಜೀವನವೇ ಉತ್ತಮ ಎಂಬ ಫಿಲಾಸಫಿ! ನನಗೆ ಗೆಳೆಯರು ತುಂಬಾ ಕಡಿಮೆ, ಕಾರಣ ನನ್ನ ಮಾತು ಕಡಿಮೆ, ಅಂತರ್ಮುಖಿ, ಅಷ್ಟೊಂದು ಸುಲಭವಾಗಿ ತೆರೆದುಕೊಳ್ಳಲಾರದಂತ ಮನಸ್ಸು, ಗೆಳೆತನಕ್ಕೆ ನೀಡಬೇಕಾದ ಸಮಯ ನೀಡಲಾಗದ ಅಸಹಾಯಕತೆ, ಹೀಗೆ ಕಾರಣ ಹಲವು! ಬೆರಳೆಣಿಕೆಯಷ್ಟು ಗೆಳೆಯರು, ನೆಚ್ಚಿನ ಮಡದಿ, ಮುದ್ದಿನ ಮಗ, ಜೀವನ ಇವರ ಮದ್ಯ ಸುಂದರವಾಗಿ ಸಾಗುತ್ತಿತ್ತು. ಅನಿವಾರ್ಯತೆಗಳ ಆಧಾರಗಳ ಮೇಲೆ ನನ್ನ ಸಮಯ ಇವರುಗಳೊಂದಿಗೆ ವಿನಿಯೋಗವಾಗುತ್ತಿತ್ತು! ಸಂಬಂಧಗಳಿಗೆ ಬೆಲೆ ಕೊಡುವುದು ಎಷ್ಟು ಮುಖ್ಯವೋ, ಸಮಯ ನೀಡುವುದು ಅಷ್ಟೇ ಮುಖ್ಯ. ನಾನು ಮತ್ತು ನನ್ನ ಮಡದಿ ಹಲವಾರು ಬಾರಿ ಯೋಚಿಸಿದ್ದಿದೆ, ನಮ್ಮ ಬಳಿ ಸಮಯವೇ ಇಲ್ಲವೆಂದು. ಟ್ರಾಫಿಕ್ ಪೊಲೀಸ್, ಹೆಲ್ಮೆಟ್ ಇಲ್ಲವೆಂದೊ ಅಥವಾ ಮತ್ತಾವುದೊ ಕಾರಣಕ್ಕೆ ನಿಲ್ಲಿಸಿ ಸಮಯ ವ್ಯರ್ಥಮಾಡಿದರೆ, ಆತನಿಗೆ ಒಂದು ಸಲಾಮ್ ಹೊಡೆದು, ಸಮಯ ಹಾಳುಮಾಡದೆ ಕೊಡಬೇಕಾದ ಶುಲ್ಕ ಕೊಟ್ಟು, ಅಲ್ಲಿಂದ ಪಾರಾಗುವುದು ಮುಖ್ಯವಾಗುತ್ತದೆಯೇ ಹೊರತು, ಆತನೊಂದಿಗೆ ವ್ಯರ್ಥ ಕಾಲಾಹರಣ ಮಾಡಿ ೧೦೦-೨೦೦ ಉಳಿಸುವ ಸಮಯವಿರುವುದಿಲ್ಲ. ಇದನ್ನು ನೆನಪಿಸಿಕೊಂಡು ಅಸಹಾಯಕತೆಯ ನಗೆ ನಕ್ಕು ಸುಮ್ಮನಾಗಿದ್ದಿದೆ! ಸಂಬಂಧಗಳು ನಮ್ಮ ಜೀವನಶೈಲಿಗೆ ತಳುಕುಹಾಕಿಕೊಂಡು, ದೋಣಿಯ ಲಯಕ್ಕೆ, ನದಿ

ನನ್ನ ಸಾಹಿತ್ಯದ ಶ್ರೀಕಾರನ ಸುತ್ತಾ....

ಯುಗಾದಿಯ ದಿನ ಬ್ಲಾಗ್ ಪ್ರಾರಂಭ ಮಾಡಲು ಒಳ್ಳೆಯ ದಿನ ಎಂದು ಮುದ್ದಿನ ಮಡದಿಯ ಉವಾಚ! ಎಷ್ಟೋ ದಶಕಗಳ ನಂತರ ಸಾಹಿತ್ಯದಲ್ಲಿ ಆಸಕ್ತಿ ಮೂಡಲು ಪ್ರಾರಂಭವಾಗಿತ್ತು! ಇದಕ್ಕೆ ಕಾರಣ ಶ್ರೀ! ಶ್ರೀ ನನ್ನ ಬಾಲ್ಯ ಸ್ನೇಹಿತ. 3೦ ವರ್ಷಗಳ ನಂತರ ಹಳೆಯ ಸ್ನೇಹಿತರನ್ನೆಲ್ಲಾ ಒಟ್ಟು ಸೇರಿಸಿದ ಭಗೀರಥ!  ವಾಟ್ಸಪ್ ಎಂಬ ಸಣ್ಣ ಅ್ಯಪ್ನಲ್ಲಿ ಮೂಲೆಮೂಲೆಗಳಲ್ಲಿ ಚದುರಿಹೋಗಿದ್ದ ಬಾಲ್ಯದ ೩0ಕ್ಕಿಂತ ಹೆಚ್ಚು ಸ್ನೇಹಿತರನ್ನು ಒಟ್ಟುಗೂಡಿಸಿದ್ದ! ಬಾಲ್ಯದಲ್ಲಿ ಆತನೊಂದಿಗೆ ಕಾಲಕಳೆದ್ದಿದ್ದ ಒಂದೇ ಒಂದು ಉದಾಹರಣೆಯು ನೆನಪಿಗೆ ಬಂದಿರಲಿಲ್ಲ, ಆದರೆ ಯಾಕೋ ತುಂಬಾ ಆತ್ಮೀಯನಾಗಿಬಿಟ್ಟಿದ್ದ. ಅದೊಂದು ದಿನ ಅಚಾನಕ್ ಆಗಿ ತನ್ನ ಬ್ಲಾಗ್ ಲಿಂಕನ್ನು ಕಳುಹಿಸಿಕೊಟ್ಟಿದ್ದ. ಸ್ನೇಹಿತನ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಬ್ಲಾಗ್ ಸಂಪೂರ್ಣವಾಗಿ ಓದುವಂತೆ ಮಾಡಿತ್ತು. ಆತನು ಬರೆದ ಅದ್ಬುತ ಬರವಣಿಗೆ ನನ್ನನ್ನು ಮೂಕವಿಸ್ಮಿತನನ್ನಾಗಿಸಿತ್ತು! ಸಾಹಿತ್ಯ ಒಮ್ಮೆಲೆ ಮ್ಯೆಯನ್ನು ಆವರಿಸಿದ ಸ್ಥಿತಿ. ಅದೊಂದು ದಿನ ಶ್ರೀ ತನ್ನ ಅತ್ತೆಯನ್ನು ಕಳೆದುಕೊಂಡ ದುಃಖದಲ್ಲಿದ್ದ. ನನಗೆ ದುಃಖದಲ್ಲಿರುವರನ್ನು ಸಂತ್ಯೆಸುವ ಕಲೆ ಬಾರದು! ಏನು ಹೇಳಬೇಕೆಂದು ತೋಚಲಿಲ್ಲ. ಕಳೆದುಕೊಂಡವರಿಗಷ್ಟೇ ಗೊತ್ತು ಕಳೆದ ವಸ್ತುವಿನ ಬೆಲೆ! ಸುಮ್ಮನಾದೆ! ಮಾರನೆಯ ದಿನ ಮಧ್ಯಾನ್ಹದ ಸುಮಾರಿಗೆ ಶ್ರೀ ಮತ್ತೊಂದು ಲಿಂಕನ್ನು ಕಳುಹಿಸಿದ. "ಹಳ್ಳಿಯಾತನ ಅಮರವಾಣಿ" ಎಂಬ ಆ ಲೇಖನ ನನ್ನನ್ನು ಕೆಲವು ಘಳಿಗೆ ಸ್ಥಬ್ಧನ