Posts

Showing posts from May, 2017

ಗಿರಿಕನ್ಯೆ......ನನ್ನ ಮನದನ್ನೆ!

ಅಕ್ಷರಾಕ್ಷರ ಸೇರಿ ಪದವಾಯಿತು. ಪದಪದಗಳು ಸೇರಿ ಮಾತಾಯಿತು! ಜೀವನದ ಪುಟಗಳು ಮೊದಲಾಯಿತು! ನಾನೇ ಬರೆದ ನನ್ನಯ ಬದುಕಿನ ಸಾಲಾಯಿತು! ನನ್ನಯ ಬದುಕು, ನನ್ನದೇ ಮಾತು! ಕವಿಯು ನಾನೇ, ಪಾತ್ರವೂ ನಾನೇ! ಪಾತ್ರಕೆ, ಜೀವನದ ಘಟನೆಯ ನಂಟು! ಅದ ನಿಭಾಯಿಸುವ ಪರಿ, ನಿನ್ನ ನಿಘಂಟು! ಕಣ್ಷೆದುರಿಗೆ ಅಗಾಧವಾದ ಬೆಟ್ಡ. ತಳದಿಂದ ಮುಡಿಯವರೆಗೂ ಒಮ್ಮೆ ಕಣ್ಣಳತೆ ಮಾಡಲು ಪ್ರಯತ್ನಿಸಿದೆ, ಕೊನೆ ನನ್ನ ಕಣ್ಣಳತೆಗೆ ಮೀರಿತ್ತು. ಸಮಯ ೧೧ ದಾಟಿತ್ತು. ಸೂರ್ಯ ನೆತ್ತಿಯ ಸುಡಲು ಒಡೋಡಿ ಬರುತ್ತಿದ್ದ, ಮಡದಿ, ಬೆಟ್ಟವನ್ನು ಹತ್ತಬೇಕೆಂದರೆ ಮನೆಯನ್ನು ಬೇಗನೇ ಬಿಡಲು ಬಾರಿಬಾರಿ ಹೇಳಿದ್ದಳು, ಆದರೆ ಭಾನುವಾರದ ಸವಿಯಾದ ನಿದ್ದೆಯಿಂದ ಏಳಲಾರದೆ ಎದ್ದು ಹೊರಟು, ಮಧುಗಿರಿಯನ್ನು ತಲುಪಿದಾಗ ೧೧  ದಾಟಿತ್ತು. ಮಡದಿ, ಮಗ ಬೆಟ್ಡವನ್ನು ಹತ್ತಲು ಉತ್ಸುಕರಾಗಿದ್ದರು, ಮಡದಿ ಮತ್ತೊಮ್ಮೆ ಹೇಳಿದಳು, ಇಷ್ಟೊಂದು ಬಿಸಿಲು, ನಾವು ಮುಂಜಾನೆಯೇ ಮಧುಗಿರಿ ತಲುಪಬೇಕಿತ್ತು. ಬೆಟ್ಟವನ್ನು ಮತ್ತೊಮ್ಮೆ ನೋಡಿದೆ. ನನ್ನ ಊಹೆಯಂತಿರಲಿಲ್ಲ. ಊಹೆಗೂ ಮೀರಿ. ಕೋಟೆ, ಗಿರಿಗಳ ಸಮ್ಮಿಶ್ರದ ಮಧುಗಿರಿ ಉಳಿದ ಬೆಟ್ಟಗಳಿಗಿಂತ ವಿಶಿಷ್ಟವಾಗಿತ್ತು. ಮಡದಿಯನ್ನೊಮ್ಮೆ ನೋಡಿದೆ, ಮನ ಹಿಂದೋಡಿತು. ಅಂದು ಮದುವೆಗೆ ಹುಡುಗಿಯ ನೋಡಲು ದಿನ ನಿಶ್ಷಯವಾಗಿತ್ತು. ಕನ್ನಡ, ತೆಲುಗು ಸಿನಿಮಾಗಳನ್ನು ನೋಡಿ ಬೆಳದಿದ್ದ ಮನ ಅದೇ ದಾಟಿಯ ಕನಸಿನ ಕನ್ಯೆಯ ಹುಡುಕಾಟದಲ್ಲಿತ್ತು. ಸುಂದರ ಮೊಗದ, ನಾಚಿಕೆ ವಯ್ಯಾರದ,